Friday, 20 October 2017

Deepavali

ದೀಪಾವಳಿ ಬಂತು ಸಡಗರ ತಂತು
ಬಾಲ್ಯದ ನೆನಪು ಖುಷಿಯ ತಂತು
ಹೊಸ ಬಟ್ಟೆಯ ಸಡಗರ ಸಂಭ್ರಮ
ಅಮ್ಮನ ಕೈ ಅಡುಗೆಯೆ ರುಚಿಕರ
ಅಕ್ಕ ತಮ್ಮನ ಜೊತೆ ಪಟಾಕಿ ಸಂಭ್ರಮ
ಡಂ ಡುಂ ಎನ್ನುವ ಪಟಾಕಿಯ ಜೊತೆಗೆ
ಸುರ್ ಎಂದು ಸುಡುವ ಸುಸೂರ್ ಬತ್ತಿ
ಚರ್ ಚರ್ ಎಂದು ಸುತ್ತುವ ಭೂಚಕ್ರ
ಜುಯ್ ಎಂದು ಮೇಲೆ ಹೋಗುವ ರಾಕೆಟ್
ಎಲ್ಲ ನೆನಪು ಸುಂದರ ಸುಮಧುರ
ದೀಪಾವಳಿಯ ಶುಭಾಶಯಗಳು

No comments:

Post a Comment