Friday, 20 October 2017

Deepavali

ದೀಪಾವಳಿ ಬಂತು ಸಡಗರ ತಂತು
ಬಾಲ್ಯದ ನೆನಪು ಖುಷಿಯ ತಂತು
ಹೊಸ ಬಟ್ಟೆಯ ಸಡಗರ ಸಂಭ್ರಮ
ಅಮ್ಮನ ಕೈ ಅಡುಗೆಯೆ ರುಚಿಕರ
ಅಕ್ಕ ತಮ್ಮನ ಜೊತೆ ಪಟಾಕಿ ಸಂಭ್ರಮ
ಡಂ ಡುಂ ಎನ್ನುವ ಪಟಾಕಿಯ ಜೊತೆಗೆ
ಸುರ್ ಎಂದು ಸುಡುವ ಸುಸೂರ್ ಬತ್ತಿ
ಚರ್ ಚರ್ ಎಂದು ಸುತ್ತುವ ಭೂಚಕ್ರ
ಜುಯ್ ಎಂದು ಮೇಲೆ ಹೋಗುವ ರಾಕೆಟ್
ಎಲ್ಲ ನೆನಪು ಸುಂದರ ಸುಮಧುರ
ದೀಪಾವಳಿಯ ಶುಭಾಶಯಗಳು

Thursday, 5 October 2017

ತುಂಬ ದಿನದ ಮೇಲೆ ಬರೆಯ ಬೇಕೆನಿಸಿದೆ ಒಂದು ಕವನ,
ಮುಂಗಾರಿನ ಈ ಮಿಂಚಿನಲ್ಲಿ ತುಂತುರಿನ ಈ ಮಳೆಯಲ್ಲಿ,
ಹೇಗೆ ಮರೆಯುವುದು ಆ ದಿನಗಳ ಪ್ರೀತಿಯ ಸಿಂಚನ ,
ಪ್ರೀತಿ ಎಂದಿಗೂ ಶಾಶ್ವತವಾಗಿ ಉಳಿವುದು ಪ್ರೀತಿಯ ಮನಸಲ್ಲಿ
ದೂರ ಮಾಡಲಾಗದು ಮನಸಿನ ಪ್ರೀತಿಯ, ಹುಡುಗಿಯ ಎದೆಯಲ್ಲಿ